ಗುರುವಾರ, ಡಿಸೆಂಬರ್ 20, 2012

ನೇರದಿ ಕಪಿಯ ಲಾಂಛನವು ???




ಹಾರಾಡುವ ಮನವನು ಕಟ್ಟಿಟ್ಟಂತೆ
ನೇರದಿ ಕಪಿಯ ಲಾಂಛನವು
ಹಾರುವ ಸ್ಯಾದ್ವಾದಮುದ್ರೆಯಿಂಕಟ್ಟಿದರ್
ಸರ್ವಸ್ವವಾಗಿರಿಸಿ

ಬುಧವಾರ, ಡಿಸೆಂಬರ್ 19, 2012

ಗಣಿತದ ಹತ್ತು ವೃಕ್ಷಗಳು



ಮಣಿರತ್ನಮಾಲೆಆಹಾರಾದಿಗಳನೀವ
ಗಣಿತದ ಹತ್ತು ವೃಕ್ಷಗಳು
ಕ್ಷಣದೊಳು ಕಲ್ಪದಿಂದೈತಂದೊಂದಾದಂತೆ
ಜಿನರಾಸನವೃಕ್ಷಕಲ್ಪ

ಮಂಗಳವಾರ, ಡಿಸೆಂಬರ್ 18, 2012

“ಸುಧಾರ್ಥಿ ಹಾಸನ” ಅವರನ್ನು ಕುರಿತು ಪ್ರೊ ಜಿ.ವೆಂಕಟಸುಬ್ಬಯ್ಯ ಅವರ ಅಭಿಪ್ರಾಯ



ಸಿರಿಭೂವಲಯದ ಸಂಶೋಧನೆಯಲ್ಲಿ ಆಳವಾಗಿ ಅಧ್ಯಯನ ಮಾಡುತ್ತಿರುವ “ಸುಧಾರ್ಥಿ ಹಾಸನ” ಅವರನ್ನು ಕುರಿತು     ಪ್ರೊ ಜಿ.ವೆಂಕಟಸುಬ್ಬಯ್ಯ ಅವರ ಅಭಿಪ್ರಾಯಗಳನ್ನು ಆಲಿಸಬಹುದು




ಸೋಮವಾರ, ಡಿಸೆಂಬರ್ 17, 2012

ವಿಮಲ ಸೊನ್ನೆ ಎಂಟ್ ಆರ್ ಎರಡೆರಡು ????




ಗಮನಿಸಿ ಸಾವಿರದೆಂಟು ದಲಗಳುಳ್ಳ
ಕಮಲಗಳ್ ಎರಡು ಕಾಲ್ನೂರು
ಕ್ರಮಪಾದ ಓಂದರಿಂ ಗುಣಿಸೆ ಸೊನ್ನೆಯು “ಆ”
ವಿಮಲ ಸೊನ್ನೆ ಎಂಟ್ ಆರ್ ಎರಡೆರಡು


(೧೦೦೮ x ೨೨೫ = ೨೨೬೮೦೦)

ಶನಿವಾರ, ಡಿಸೆಂಬರ್ 15, 2012

ಶ್ರಮಹರ ಪಾಹುಡ ಗ್ರಂಥ



ವಿಮಲ ಸಿಂಹದ ಪ್ರಾತಿಹಾರ್ಯ
ಸಮವಿಷಮಾಂಕದೆ ಶೂನ್ಯ
ಗಮಕ ಲಕ್ಷಣದ ಅಹಿಂಸೆ
ಶ್ರಮಹರ ಪಾಹುಡ ಗ್ರಂಥ
 
ಮೇರುವಬಲಕ್ಕಿಂತಿರುಗುತನೆಲೆಸಿರ್ಪ
ಭೂರಿವೈಭವಯುತರಾದ
ಸಾರದ ಬೆಳಕಬೀರುವ ಚಂದ್ರಸೂರ್ಯರು
ಧಾರುಣಿಯೊಳ್ ತೋರ್ಪವರೆಗೆ

ಬರೆಯಬಾರದ ಬರೆದರು ಓದಬಾರದ ???



ದರುಶನ ಶಕ್ತಿ ಜ್ಞಾನದ ಶಕ್ತಿ
ಚಾರಿತ್ರವೆರಸಿದರತ್ನತ್ರಯವ
ಬರೆಯಬಾರದ ಬರೆದರು ಓದಬಾರದ
ಸಿರಿಯ ಸಿದ್ಧತ್ವ ಭೂವಲಯ

ಶುಕ್ರವಾರ, ಡಿಸೆಂಬರ್ 14, 2012

ಗುರುವಿನಚರಣಧೂಳಿಯಹೊತ್ತಮೋಘಾಙಕ




ಸಿರದೊಳಧರಿಸಿರ್ದ ಮುಕುಟದೊಳ್ಕೆತ್ತಿರ್ದ
ವರರತ್ನದ್ಯುತಿಹರಿಸ
ಗುರುವಿನಚರಣಧೂಳಿಯಹೊತ್ತಮೋಘಾಙಕ
ದೊರೆಯ ರಾಜ್ಯದಳ್  ಭೂವಲಯ

ಗುರುವಾರ, ಡಿಸೆಂಬರ್ 13, 2012

ವಶವಲ್ಲದ ಮನ ಕೋಣನಂತಿರ್ದಾಗ ???



ವಶವಲ್ಲದ ಮನ ಕೋಣನಂತಿರ್ದಾಗ
ವಶಗೊಳಿಸಿದ ಜಿನಮುದ್ರೆ
ಹೊಸಭೂವಲಯದಿ ಲಾಂಛನವಾಗಲು
ವಶವಾಯ್ತೆಮ್ಮಯ ಸೊಮ್ಮು

ಬುಧವಾರ, ಡಿಸೆಂಬರ್ 12, 2012

ತೇಜೋಲೇಶ್ಯೆಯ ಬಣ್ಣ ???




ಳೂಗಾ ಎಂದರೆ ವಸ್ತ್ರವ ಬಿಟ್ಟ ಋಷಿಗಳು
ಆಗಮದೊಳ್ ಪೇಳಿರುವ
ತಾಗುವ ತೇಜೋಲೇಶ್ಯೆಯ ಬಣ್ಣವ
ನೀಗಪೇಳುವೆ ಕಾವ್ಯದಲಿ

ಮಂಗಳವಾರ, ಡಿಸೆಂಬರ್ 11, 2012

ಸಾಕಪ್ಪ ಪಾಪದಪಿಂಡವೆಂಬುವಜೀವ



ಏಕೆವೈರಬಿಡಚಂಡಭಂಡನಶೀಲ
ಬೇಕಾಗೆಧರ್ಮವಹಳಿವ
ಸಾಕಪ್ಪ ಪಾಪದಪಿಂಡವೆಂಬುವಜೀವ
ನಾರಕವದು ಕೃಷ್ಣಲೇಶ್ಯೆ

ಸೋಮವಾರ, ಡಿಸೆಂಬರ್ 10, 2012

ನಾಡಿನ ಹೂಗಳ ಮಳೆ ???




ಓಡುತ ಬನ್ನಿರಿದರ್ಶನಕೆನ್ನುವ
ಹಾಡೋ ಇದೆಂಬದುಂದುಭಿಣ
ಪಾಡಿನಗಂಭೀರನಾದವಿಹುದುಮುಂದೆ
ನಾಡಿನ ಹೂಗಳ ಮಳೆಯು

ಭಾನುವಾರ, ಡಿಸೆಂಬರ್ 9, 2012

ಜಕ್ಕಿಲಕ್ಕಿ ??? (ಯಾರೀ ಜಕ್ಕಿ ಲಕ್ಕಿ?? ಅಮೋಘವರ್ಷನ ಅತ್ತಿಗೆ ????)



ಜಿನವೈಷ್ಣವಸೈಗೊಟ್ಟಮಾರನರಾಯ
ನಮೋಘಾಂಕವಿಜಿಭಲದ
ಭಲದಸೌಲಭ್ಯದೆನ್ನನುಮೆಚ್ಚಿಸಿಹ್ ನಿಮ್ಮ
ಲಲನೆಯಕ್ಕನು ಜಕ್ಕಿಲಕ್ಕಿ

ಶನಿವಾರ, ಡಿಸೆಂಬರ್ 8, 2012

ನೇಮಿಗೀತೆ ನಮ: ಋಷಿಮಂಡಲ



ನೇಮಿಗೀತೆ ನಮ: ಋಷಿಮಂಡಲ
ದಮಹಾಮಂತ್ರದಮಲ ಬೀಜಾಕ್ಷರವಜ್ರ
ದೆಮಗೆಸದ್ಗತಿಯೊಳಗಪವರ್ಗ ಸಾಧಿಪ

ವಿಮಲಗುಣಾಂತರವಲ್ಲರಿ

ಶುಕ್ರವಾರ, ಡಿಸೆಂಬರ್ 7, 2012

ಭಾರತದೇಶದಮೋಘವರ್ಷನ ರಾಜ್ಯ ???



ಭಾರತದೇಶದಮೋಘವರ್ಷನ ರಾಜ್ಯ
ಸಾರಸ್ವತವೆಂಬಂಗ
ಸಾರಾತ್ಮಕಗಣಿತದೊಳಕ್ಷರಸಕ್ಕದ
ನೂರು ಸಾವಿರ ಲಕ್ಷ ಕೋಟಿ

ಗುರುವಾರ, ಡಿಸೆಂಬರ್ 6, 2012

ಕರ್ಮಾಟಕವು ಮಾಗಧ ಮಾಲವ ಗೌಡ ????



ಕರ್ಮಾಟಕವು ಮಾಗಧ ಮಾಲವ ಗೌಡ
ಗುರ್ಜರ ಲಾಡವು ಸೇರಿ
ಸರ್ವ ಕುರು ಹರಿ ಯದುವಂಶವಡೆಸರ್ಗೆ
ಪೆರ್ಮೆಯ ಗುರು ಬ್ರಾಹ್ಮಣಾಂಕ

ಸೋಮವಾರ, ಡಿಸೆಂಬರ್ 3, 2012

ಸಾವಿನಧರ್ಮವನರಿತು



ಸಾವಿರಮಾತಿರಲಲ್ಲಿ ಕಾಮ್ಯವಬಿಟ್ಟು
ಸಾವಿನಧರ್ಮವನರಿತು
ನಾವಿಹಪರಿಯದೆ ಫಲದಾಸೆಯ ತ್ಯಾಗ
ದಾವಸ್ತು ಕಾಮ್ಯಾನಾಮವಿವರಾ

ಜಿನತಪವನು ಮಾರಿಬಿಟ್ಟು ???



ಮನಸಿಜನಾಟವುಬೇಕೆಮಗೆನ್ನುತ
ಜಿನತಪವನು ಮಾರಿಬಿಟ್ಟು
ಕೊನೆಗೆ ಬಂದಿಲ್ಲಿ ದೇವಿಯರ ಸೌಖ್ಯದೊಳಿದ್ದನ
ಜಿನಭಕ್ತಕಾವ್ಯ ಭೂವಲಯ

ಕಾಮದ ವಿಸ್ತಾರವಿದುರರಿಲ್ಲದ ಭೂವಲಯರ್ ??



ಎದೆಯಿಂದೆದೆಯನೊತ್ತುತ
ಸಂದಭವನಾಮರರ ಮಿಥುನರ್
ಮಿಥುನರದರವೈವಿದ್ಯಾಂಕವಿರುವಾಗಣನೆ
ಕಾಮದ ವಿಸ್ತಾರವಿದುರರಿಲ್ಲದ ಭೂವಲಯರ್

ಕುಚಗಳ ಸ್ಪರ್ಶಸುಖ ???



ವನಿತಬಿಂಬಾದರದ ಚುಂಬನದ ರಸಪೀರ್
ದನದರರಸ್ದರುಚಿಯಿಂತೇರಿದರ್
ಶನದಪರವಶರಾನಂದ ಲಾವಣ್ಯವ ನೋಡುತ
ಬಿಡದೆ ಕುಚಗಳ ಸ್ಪರ್ಶಸುಖ

ಹೆಮ್ಮೆಯ ಸಂಸಾರಸುಖ ????



ಹಿಮ್ಮೆಟ್ಟಿ ನಿರ್ಮಲತಪದಿಂದ್ದಜೀವರು
ಹೆಮ್ಮೆಯ ಸಂಸಾರಸುಖವು
ಒಮ್ಮೆಗೇ ಬರಬೇಕೆಂದು ನಿಧಾನದಿ
ನೆಮ್ಮಿದರೀಭವನನಿಲಯ

ಪ್ರೇಮೋದ್ರೇಕ ನೆಲಕ್ರೀಡೆ ???



ವಲ್ಲಭೆಯರೆರಳ್ ಸಹಸ್ರವಿಚಿತ್ರ ಕ್ರಿಯೆ
ಜತನದ ಪ್ರೀತಿಯೊಳಿಹ ಜಲಕ್ರೀಡೆ
ಸುರಭಿಸುಸ್ಪರ್ಷಂಪುಳಿನಸ್ಥಳದ ನೆಲದೊಳ್
ಕ್ರೀಡಿಪ ಪ್ರೇಮೋದ್ರೇಕ ನೆಲಕ್ರೀಡೆಯ